Monday, February 14, 2011

ಪುಣ್ಯ ಕೋಟಿ ಕಥೆ

Don't know suddenly i remembered this song today.... When i was a kid amma used to sing this song to me... She says i used to cry whenever she sang me the lines where punyakoti leaves her calf in the cowshed and heads towards the tiger... Now amma sings this song to my Siddhanth, he is learnt to say the story too... Thought will blog this... I am sure most of you would know this song and would have something to say about this too... :)
For those who don't know this is nice story you want to read... :) have some translation for this Kannada song too.. :)

ಧರಣಿ
ಮಂಡಲ ಮಧ್ಯದೊಳಗೆ
ಮೆರೆಯುತಿಹ ಕರನಾಟದೊಳಗೆ
ಕಾಳಿಂಗನೆಂಬ ಗೊಲ್ಲನ ಪರಿಯನೇನಂತು ಪೇಳ್ವೆನು
I speak about the cowherd Kalinga residing in the resplendent country of Karnata(ka)
within the middle region of the earth .


ಎಳೆಯ ಮಾವಿನ ಮರದ ಕೆಳಗೆ ಕೊಳನೂದುತ ಗೊಲ್ಲ ಗೌಡನು
ಬಳಸಿನಿಂದ ತರುಗಳನ್ನು ಬಾಲುಗೆ ಕರೆದನು ಹರುಷದಿ
ಗಂಗೆ ಬಾರೆ ಗೌರಿ ಬಾರೆ ತುಂಗಭದ್ರೆ ತಾಯಿ ಬಾರೆ
ಪುಣ್ಯಕೋಟಿ ನೀನು ಬಾರೆ ಎಂದು ಗೊಲ್ಲನು ಕರೆದನು
ಗೊಲ್ಲ ಕರೆದ ದನಿಯ ಕೇಳಿ ಎಲ್ಲ ಹಸುಗಳು ಬಂದು ನಿಂದು
ಚೆಲ್ಲಿ ಸೂಸಿ ಹಾಲ ಕರೆಯಲು ಅಲ್ಲಿ ತುಂಬಿತು ಬಿಂದಿಗೆ
ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು

Playing his flute under the young mango tree, the cowherd called to the cattle standing around him

“ Ganga (e) come, Gauri come hither, mother Tungabhadre come, Punyakoti you too come”

On hearing the cowherd’s voice, the cows came closer, and upon milking them, the vessel was filled to the brim.

This is the tale of Punyakoti who believed that Truth is God


ಹಬ್ಬಿದ ಮಲೆ ಮಧ್ಯದೊಳಗೆ ಅರ್ಭುತನೆನೆಂಬ ವ್ಯಾಘ್ರನು
ಅಬ್ಬರಿಸಿ ಹಸಿಹಸಿದು ಬೆಟ್ಟದ ಕಿಬ್ಬಿಯೊಳು ತಾನಿದ್ದನು
ಮೊರೆದು ರೋಷದಿ ಗುಡುಗುತ ಹುಲಿ ಭೋರಿಡುತ
ಚಂಗ್ಗನೆ ಜಿಗುದು ನೆಗೆಯಲು ಚೆದರಿ ಹೋದವು ಹಸುಗಳು
In the middle of the spreading forest, a hungrily roaring tiger named Arbhutan lived in a cave among the mountains

Bellowing and thundering with rage, the tiger in search of a meal leapt and jumped amidst the cattle upon which they ran helter - skelter.



ಪುಣ್ಯಕೋಟಿಯೆಂಬ ಹಸುವು ತನ್ನ ಕಂದನ ನೆನದುಕೊಂಡು
ಮುನ್ನ ಹಾಲನು ಕೊಡುವೆನೆಂತು ಚೆಂದದಿ ತಾ ಬರುತಿರೆ
ಇದಿನನಗೆ ಆಹಾರ ಸಿಕ್ಕಿತು ಎಂದು ಬೇಗನೆ ದುಷ್ಟ ವ್ಯಗ್ರನು
ಬಂದು ಬಳಸಿ ಅಡ್ಡಗಟ್ಟಿ ನಿಂದನಾ ಹುಲಿರಾಯನು
The cow named Punyakoti, thinking of her child and planning to feed her was coming by

“Today I have found food” thought the wicked tiger and circling the cow he stood blocking her way


ಮೇಲೆ ಬಿದ್ದು ನಿನ್ನನೀಗಲೆ ಬಿಳಹೊಯ್ವೇನು ನಿನ್ನ ಹೊಟ್ಟೆಯಾ
ಸೀಳಿಬಿಡುವೆನು ಎನುತ ಕೋಪದಿ ಕೂಳ ವ್ಯಾಘ್ರನು ಕೂಗಲು
ಒಂದು ಬಿನ್ನಹ ಹುಲಿಯೇ ಕೇಳು ಕಂದನಿರುವನು ದೊಡ್ಡಿಯೊಳಗೆ
ಒಂದು ನಿಮಿಷದಿ ಮೊಲೆಯ ಕೊಟ್ಟು ಬಂದು ಸೇರುವೆನಿಲ್ಲಿಗೆ
ಹಾಸಿದೆ ವೇಳೆಗೆ ಸಿಕ್ಕಿದೊಡವೆಯ ವಶವ ಮಾಡದೆ ಬಿಡಲು ನಾನು
ನುಸುಳಿ ಹೋಗುವೆ ಮತ್ತೆ ಬರುವೆಯಾ ಹುಸಿಯ ನುಡಿಯುವೆನೆನ್ತಿದು

“I will fall upon you and bring you down. I will split your belly” screamed the tiger.

Punyakoti says “Listen Tiger, I have a request. I have a son in the cowshed. I will feed him and return to you in a minute”

“At a hungry time when I have cornered you, if I do not capture you, you will slip away. Will you come back? You are lying” says the tiger


ಸತ್ಯೇವೆ ನಮ್ಮ ತಾಯಿ ತಂದೆ ಸತ್ಯವೇ ನಮ್ಮ ಬಂದು ಬಳಗ
ಸತ್ಯ ವಾಖ್ಯಾಕೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು
ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು

“Truth is our mother and father. Truth is our near and dear. If the truth is not followed, the Supreme Self will not approve” answers Punyakoti

This is the tale of Punyakoti who believed that Truth is God



ಕೊಂದು ತಿನ್ನುವೆಯೆಂಬ ಹುಲಿಗೆ ಚೆಂದವಾಗಿ ಭಾಷೆ ಕೊಟ್ಟು
ಕಂದ ನಿನ್ನನು ನೋಡಿ ಪೋಗುವೆನೆಂದು ದೊಡ್ಡಿಗೆ ಬಂದೆನು
ಆರ ಮೊಲೆಯನು ಕುಡಿಯಲಮ್ಮ ಆರ ಬಳಿಯಲಿ ಮಲಗಲಮ್ಮ
ಆರ ಸೇರಿ ಬದುಕಲಮ್ಮ ಆರು ನಂಗೆ ಹಿತವರು?
“I have come after promising the tiger who wanted to kill and eat me that I will return to him after seeing you” says Punyakoti to her child

Punyakoti’s calf: “Whose udder shall I drink from? By whose side shall I sleep? With whom shall I live? Who is there to be good to me?”


ಅಮ್ಮಗಳಿರ ಅಕ್ಕಗಳಿರ ಎನ್ನ ತಾಯೋಡ ಹುಟ್ಟುಗಳಿರ
ಕಂದ ನಿಮ್ಮವನೆಂದು ಕಾಣಿರಿ ತಬ್ಬಲಿಯ ಕರುವನು
ಮುಂದೆ ಬಂದರೆ ಹಾಯಬೇಡಿ ಹಿಂದೆ ಬಂದರೆ ಒದೆಯಬೇಡಿ
ಕಂದ ನಿಮ್ಮವನೆಂದು ಕಾಣಿರಿ ತಬ್ಬಲಿಯ ಕರುವನು

Punyakoti: “Oh mothers and sisters, those born to my mother, please look upon this orphan calf as your own”

“If he comes in front of you, please do not gore him. If he gets behind you kindly do not kick him. Please look upon this orphan as your own child.”


ತಬ್ಬಲಿಯು ನೀನಾದೆ ಮಗನೆ ಹೆಬ್ಬುಲಿಯ ಬಾಯನ್ನು ಹೋಗುವೆನು
ಇಬ್ಬರ ಋಣ ತೀರಿತೆಂದು ತಬ್ಬಿಕೊಂಡಿತು ಕಂದನ
ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು

“Son, you have become an orphan. I am going into the mouth of the great tiger. Our bond ends here” Punyakoti hugs her child

This is the tale of Punyakoti who believed that Truth is God


ಗೋವು ಕರುವನು ಬಿಟ್ಟು ಬಂದು ಸಾವಕಾಶವ ಮಾಡದಂತೆ
ಗವಿಯ ಬಾಗಿಲ ಸೇರಿ ನಿಂತು ತವಕದಲಿ ಹುಲಿಗೆಂದಿತು
ಖಂಡವಿದೆಕೋ ಮಾಂಸವಿದೆಕೋ ಗುಂಡಿಗೆಯ ಬಿಸಿರಕ್ತವಿದೆಕೋ
ಚಂದವ್ಯಘ್ರನೆ ನೀನೆದೆಲ್ಲವ ಉಂಡು ಸಂತಸದಿಂದಿರು

Leaving the calf behind, the cow with no further delay stood in front of the cave door and said anxiously

“Take my flesh, take my meat. Take the warm blood from my heart. Oh fierce tiger, have all this and be happy”


ಪುಣ್ಯಕೋಟಿಯ ಮಾತಾಕೇಳಿ ಕಣ್ಣಿರನು ಸುರಿಸಿ ನೊಂದು
ಕಣ್ಣೆಇವಳನು ಕೊಂದು ತಿಂದರೆ ಮೆಚ್ಚನಾ ಪರಮಾತ್ಮನೂ
ಎನ್ನ ಒಡಹುಟ್ಟಕ್ಕ ನೀನು ನಿನ್ನ ಕೊಂದು ಏನ ಪಡೆವೆನು
ಎನ್ನುತ ಹುಲಿ ಹಾರಿ ನೆಗೆದು ತನ್ನ ಪ್ರಾಣವ ಬಿಟ್ಟಿತು

Listening to Punyakoti’s words, the tiger was pained. Shedding tears, he says “If I kill and eat you it will not please God Almighty”

“You are like a sister born with me. What will I gain by killing you?” So saying, the tiger jumped down and gave up his life


ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು

This is the tale of Punyakoti who believed that Truth is God

5 comments:

Asha said...

Vice nice song to recollect... Preeti

Anonymous said...

ha ha good one...

Ananth V Rao said...

Wonderful Pinki! Thanks for sharing. It is really nice to remember those days when we used to sing these poems. Gone are those days, it is full of "twinle twinkle" and "humpty dumpty sat on a wall" now. :)

sushma sunish said...

It was ages i recalled this poem...thanks for putting it up on ur blog :-) you made all of us recall our childhood days :-)

hLata said...

these days hardly any songs are story based. however, this took me to my chilhood days wen my aunts were singing these lines to me!!!